**വിദ്യാഭ്യാസ അവകാശനിയമം - 2009 ഫലപ്രദമായി നടപ്പാക്കുന്നതിനും പ്രീ സ്കൂൾ മുതൽ 12 ക്ലാസ്സുവരെയുള്ള സ്കൂൾ വിദ്യാഭ്യാസം മെച്ചപ്പെടുത്തുന്നതിനും ആവശ്യമായ നിർദ്ദേശങ്ങൾ ക്ഷണിക്കുന്നു.. see downloads**സ്കൂൾ സുരക്ഷാ പദ്ധതി - ദേശീയ ദുരന്ത നിവാരണ അതോറിറ്റി നിർദേശങ്ങൾ - സാങ്കല്പിക കേഡർ -(Virtual Cadre) - ഓഫീസർമാരുടെ നിയമനം സംബന്ധിച്ച് ഉത്തരവ് പുറപ്പെടുവിക്കുന്നു**മാനസികമായ വെല്ലുവിളികൾ നേരിടുന്ന കുട്ടികൾക്കായുള്ള വിദ്യാഭ്യാസ സ്ഥാപനങ്ങൾക്ക് 2018 -2019 സാമ്പത്തികവർഷം സംസ്ഥാന സർക്കാരിൽ നിന്നും സാമ്പത്തിക സഹായം ലഭിക്കുന്നതിനുള്ള വിശദംശങ്ങൾ സമർപ്പിക്കുന്നത് സംബന്ധിച്ച് നിദേശങ്ങൾ -ഡൗണ്‍ലോഡ്സ് കാണുക**Finance Department—Pay Revision arrears—Third installment—Directions to process the same in SPARK.see downloads**

Please send study materials to shreeshaedneer@gmail.com

Saturday, 2 November 2013

ರಿಜಿಸ್ಟರ್ ಮಾಡಿಯೂ ಆಧಾರ್ ಕಾರ್ಡ್ ಲಭಿಸದವರಿಗೆ ಇ- ಆಧಾರ್

ರಿಜಿಸ್ಟರ್ ಮಾಡಿಯೂ ಆಧಾರ್ ಕಾರ್ಡ್ ಲಭಿಸದವರಿಗೆ ಇ- ಆಧಾರ್
ಅಕ್ಷಯ ಕೇಂದ್ರದಲ್ಲಿ ಆಧಾರ್ ರಿಜಿಸ್ಟರ್ ಮಾಡಿಯೂ ತಿಂಗಳುಗಟ್ಟಳೆ ಕಳೆದರೂ ಆಧಾರ್ ಕಾರ್ಡ್ ಲಭಿಸದವರಿಗೆ ಇ- ಆಧಾರ್ ವೆಬ್ ಸೈಟಿನಿಂದ ನೇರವಾಗಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಬಹುದು.ಅದಕ್ಕಾಗಿ ಈ ಲಿಂಕಿನಲ್ಲಿ http://eaadhaar.uidai.gov.in/eDetails.aspx ಕ್ಲಿಕ್ ಮಾಡಿರಿ.ತೆರೆದು ಬರುವ ವಿಂಡೋದಲ್ಲಿ Enrolment No. and Date time ಎಂಬಭಾಗದಲ್ಲಿ ನೀವು ಆಧಾರ್ ರಿಜಿಸ್ಟರ್ ಮಾಡಿಸಿದಾಗ ಲಭಿಸಿದ ಸ್ಲಿಪ್ಪಿನಲ್ಲಿರುವ 28 ಅಂಕೆಗಳ ಅಥವಾ 14 ಅಂಕೆಗಳ enrolment id ನಂಬರನ್ನು ಟೈಪು ಮಾಡಿರಿ.
Resident Name ಎಂಬಲ್ಲಿ ವ್ಯಕ್ತಿಯ ಹೆಸರನ್ನು ಟೈಪು ಮಾಡಿರಿ.Pincode ಎಂಬಲ್ಲಿ Pincode ನಂಬರನ್ನು ಟೈಪು ಮಾಡಿದ ಬಳಿಕ Enter the text shown ಎಂಬಲ್ಲಿ ಆ ಟೆಕ್ಸ್ಟ್ ಬೋಕ್ಸಿನ ಮೇಲೆ ಕಾಣಿಸುವ ಟೆಕ್ಸ್ಟನ್ನು ಟೈಪುಮಾಡಿ submit ಬಟನನ್ನು ಒತ್ತಿರಿ. (ಟೆಕ್ಸ್ಟನ್ನು ಟೈಪುಮಾಡುವಾಗ ಆದೇ capital letter, small letter ಇತ್ಯಾದಿಗಳಿದ್ದರೆ ಅದೇ ರೀತಿ ಟೈಪು ಮಾಡಬೇಕು.)ತೆರೆದು ಬರುವ ವಿಂಡೋದಲ್ಲಿ Mobile No: ಎಂಬಲ್ಲಿ ನೀವು  enrol ಮಾಡುವಾಗ ಕೊಟ್ಟ ಮೊಬೈಲ್ ನಂಬರನ್ನು ಟೈಪುಮಾಡಿ submit ಕೊಡಿರಿ. ಸ್ವಲ್ಪ ಹೊತ್ತಿನಲ್ಲಿಯೇ ನಿಮ್ಮ ಮೊಬೈಲಿಗೆ your high security password for download e- aadhar letter is: xxxxxx ಎಂಬ ಮೆಸ್ಸೇಜ್ ಬರುವುದಲ್ಲದೆ ಹೊಸತೊಂದು ವಿಂಡೋ ತೆರೆದು ಬರುವುದು.ಆ ವಿಂಡೋದಲ್ಲಿ ಕಾಣಿಸುವ OTP No: ಎಂಬಲ್ಲಿ ನಿಮ್ಮ ಮೊಬೈಲಿಗೆ ಬಂದ security pasword ನ್ನು ಟೈಪುಮಾಡಿ submit ಕೊಡಿರಿ.ತೆರೆದು ಬರುವ ವಿಂಡೋದ download e-aadhar ಲಿಂಕನ್ನು ಕ್ಸಿಕ್ ಮಾಡಿದಾಗ ಆಧಾರ್ ಲೆಟರ್  ಪಿ.ಡಿ.ಎಫ್ ಫೈಲಿನ ರೂಪದಲ್ಲಿ ಡೌನ್ ಲೋಡ್ ಆಗುವುದು.ಆ ಫೈಲನ್ನು ತೆರೆಯಲು ಡಬಲ್ ಕ್ಲಿಕ್ ಮಾಡಿದಾಗ password required ಎಂದು ಕೇಳುವುದು.password ಎಂಬಲ್ಲಿ   pincode ನಂಬರನ್ನು ಟೈಪುಮಾಡಿ ಆಧಾರ್ ಲೆಟರನ್ನು  ತೆರೆಯಬಹುದು.
ಇದನ್ನು ಪ್ರಿಂಟ್ ತೆಗೆಯಲು file ---- print ಕೊಟ್ಟರೆ ಸಾಕು.... ***ಒಂದು ವೇಳೆ  enrolment id (EID) ಕಳೆದು ಹೋದರೆ ಟೋಲ್ ಫ್ರೀ ನಂಬರಾದ  1800 4251 1800 ಗೆ ಫೋನ್ ಮಾಡಿ ನಿಮ್ಮ ಹೆಸರು,ಮನೆಯ ಹೆಸರು,ಪೋಸ್ಟಲ್ ಪಿನ್ ಕೋಡ್ ನಂಬರ್ ತಿಳಿಸಿದರೆ enrolment slip ನಲ್ಲಿದ್ದ 14 ಅಂಕೆಗಳುಳ್ಳ enrolment id ನಂಬರ್ ಲಭಿಸುವುದು.ಇದನ್ನು ಉಪಯೋಗಿಸಿ ಆಧಾರ್ ಲೆಟರನ್ನು ಡೌನ್ ಲೋಡ್ ಮಾಡಬಹುದು.

No comments: